Monthly Archives: August 2012

ಅಸ್ಸಾಂ ಗಲಭೆ: ಬೆಂಗಳೂರು ಪತ್ರಕರ್ತನ ಬಂಧನ

  • SMS ಮೂಲಕ ವದಂತಿ ಹಬ್ಬಿಸುತ್ತಿದ್ದ ಕಾರಣಕ್ಕೆ DH ಪತ್ರಕರ್ತ ಮುತಿ ಊರ್ ರೆಹಮಾನ್ ಎಂಬಾತನನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಇನ್ನೂ 4 ಮಂದಿಯನ್ನು ಇದೇ ವೇಳೆ ಬಂಧಿಸಲಾಗಿದೆ.
  • 26/11 ಮುಂಬೈ ದಾಳಿಯ ತೀರ್ಪಿನಲ್ಲಿ ಭಯೋತ್ಪಾದಕರಿಗೆ ನೆರವಾದ ಲೈವ್ ಚಾನೆಲ್ ಗಳನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ತೀರ್ಪು:  http://sci.nic.in/outtoday/39511.pdf ಪುಟ 245 ರಿಂದ 249
  • ಪಿ ಮಹಮ್ಮದ್ ಅವರ ಗೆರೆಗಳು ವಿಜಯ ಕರ್ನಾಟಕದಲ್ಲಿ ಕಾಣಲು ಆರಂಭವಾಗಿದೆ.

ಬೈ ಟೂ ಕಾಫಿ! ಕನ್ನಡಪ್ರಭದ ಹೊಸ ಲವಲವಿಕೆ

ಸೋಮವಾರದಿಂದ ಕನ್ನಡಪ್ರಭ ಓದುಗರಿಗೆ ವಾರದಲ್ಲಿ 5 ದಿನ ಬೈಟೂ ಕಾಫಿ ಸಿಗುತ್ತದೆ. ವಿಜಯ ಕರ್ನಾಟಕದಲ್ಲಿದ್ದಾಗ ವಿಭಟ್ ಬಳಗ ಲವಲವಿಕೆ ಪುರವಣಿ ಆರಂಭಿಸಿ ಒಳ್ಳೆಯ ಯಶಸ್ಸನ್ನು ಪಡೆದಿದ್ದರು. ಪ್ರಜಾವಾಣಿ ಬಳಗ ಈ ರೀತಿಯ ಪುರವಣಿಯನ್ನು ಮೆಟ್ರೋ ಹೆಸರಿನಲ್ಲಿ ಆರಂಭಿಸಿತ್ತಾದರೂ ಬೆಂಗಳೂರು ಹೊರಗದು ಕಾಲಿಟ್ಟಿರಲಿಲ್ಲ.

ಇದೀಗ ಸುದೀರಘ ತಯಾರಿಯೊಂದಗೆ ಬೈ ಟೂ ಕಾಫಿ ಆರಂಭಿಸಲಾಗುತ್ತಿದೆ.

ಬೈಟೂ ಕಾಫಿಯಲ್ಲಿ ತಾಜಾತನವಿದೆ, ರುಚಿಯಿದೆ ಸ್ನೇಹವಿದೆ, ಹುಮ್ಮಸ್ಸಿದೆ… ಮಿಗಿಲಾಗಿ ಒಂದು ಆಪ್ತತೆ ಇದೆ. ಕಾಫಿ ಅರ್ಧವೇ ಇದ್ದರೂ ಉಳಿದದ್ದೆಲ್ಲವೂ ಅದರಲ್ಲಿ ಪೂರ್ಣ. ಹಾಗೆಯೇ ಬೈ ಟೂ ಕಾಫಿ ಪುರವಣಿ ಪೂರ್ತಿ ಪುಟವೇ ತುಂಬಿಕೊಳ್ಳುತ್ತದೆ. ಶುಕ್ರವಾರ, ಭಾನುವಾರ ಎಂದಿನಂತೆ ಸಿನಿಮಾ, ಸಾಪ್ತಾಹಿಕ ಪುರವಣಿಗಳಿರುತ್ತವೆ. ಉಳಿದ ದಿನಗಳಲ್ಲಿ ಬೈ ಟೂ ಕಾಫಿ!

ಸಿನಿಮಾ, ಸಾಪ್ತಾಹಿಕ ಪುರವಣಿಗಳಿಗೂ ಹೊಸ ಸ್ಪರ್ಶ ನೀಡುವ ಉಮೇದು ಕನ್ನಡಪ್ರಭ ಬಳಗಕ್ಕೆ ಇದೆ.

ಸುದ್ದಿಮನೆ ಸುತ್ತು

  • ವಿಜಯ ಸಂಕೇಶ್ವರರವರ 2ನೇ ಪತ್ರಿಕೆ ‘ದಿಗ್ವಿಜಯ’ ನಿಧಾನವಾಗಿ ರೂಪುಗೊಳ್ಳುತ್ತಿದೆ. ನವಂಬರ್ ನಂತರ ಬಿಡುಗಡೆಯಾಗತ್ತದೆ ಎಂದು ನಿರೀಕ್ಷಿಸಲಾದ ‘ದಿಗ್ವಿಜಯ’ಕ್ಕೆ ಸತೀಶ್ ಚಪ್ಪರಿಕೆ ಜೊತೆಗೆ ಹಿಂದೂ ಪತ್ರಿಕೆಯ ಕೆವಿ ಸುಬ್ರಹ್ಮಣ್ಯ, ಇಂಡಿಯನ್ ಎಕ್ಸ್ ಪ್ರೆಸ್ ನ ಅನಿಲ್ ಗೆಜ್ಜೆ, ವಿಜಯ ಕರ್ನಾಟಕದ ಅರವಿಂದ ನಾವಡ ಸೇರಿದ್ದಾರೆ.
  • ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿದ್ದ ಅರುಣ್ ಸಂಪಾದಕೀಯ ಸಲಹೆಗಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
  • ಸುಗತ ಶ್ರೀನಿವಾಸರಾಜು ವಿಕ ಬಂದ ಮೇಲೆ ಪ್ರಜಾವಾಣಿಯಲ್ಲಿದ್ದು ನಿವೃತ್ತರಾಗಿದ್ದ ಡಿವಿ ರಾಜಖರ್ ಸಂಪಾದಕೀಯ ವಿಭಾಗಕ್ಕೆ ಸೇರಿದ್ದಾರೆ. ‘ಲೂಸ್ ಟಾಕ್’  ವಿಷಯದಲ್ಲಿ ವಿಭಟ್ ರಿಂದ  ತರಾಟೆಗೆ ಒಳಗಾದ ಲಕ್ಷ್ಮಣ್ ಕೊಡಸೆ ರಾಜಶೇಖರ  ಜೊತೆಗೂಡಲಿದ್ದಾರೆ.
  • ಶಿವ ಸುಬ್ರಹ್ಮಣ್ಯ ಬಂದ ಮೇಲೆ ಹೊಸದಿಗಂತ ಬಿಟ್ಟು ಹೋಗಿದ್ದ ಪಿ. ರಾಜೇಂದ್ರ ವಾಪಸ್ ಬಂದಿದ್ದಾರೆ.

ಕನ್ನಡ ಪತ್ರಿಕೋದ್ಯಮಕ್ಕೆ ಹೊಸ ದಿಗ್ವಿಜಯ…

ಇನ್ನೊಂದು ಹೊಸ ಪತ್ರಿಕೆ ಕನ್ನಡ ಪತ್ರಿಕೋದ್ಯಮ ಜಗತ್ತಿಗೆ ಕಾಲಿಡಲು ಸಿದ್ಧವಾಗುತ್ತಿದೆ. ವಿಜಯ ವಾಣಿ, ಉಷಾ ಕಿರಣ, ವಿಜಯ ಕರ್ನಾಟಕ ಗಳನ್ನು ಆರಂಭಿಸಿದ್ದ ವಿಜಯ ಸಂಕೇಶ್ವರರ ಹೊಸ ಪತ್ರಿಕೆಯ ಹೆಸರು ದಿಗ್ವಿಜಯ ಎಂದು ತಿಳಿದು ಬಂದಿದೆ. ಈಗಾಗಲೇ ಸತೀಶ್ ಚಪ್ಪರಿಕೆ ಅವರನ್ನು ಸಂಪಾದಕರಾಗಿ ನೇಮಿಸಿದ್ದು, ಇತರ ಪತ್ರಿಕೆಗಳಿಂದ ಸಣ್ಣ ಮಟ್ಟಿಗಿನ ವಲಸೆಯೂ ಆರಭವಾಗಿದೆ.

***

ಅರಕೆರೆ ಜಯರಾಮ್ ಅವರು ಉದಯವಾಣಿಯಲ್ಲಿ:

***

ಪತ್ರಿಕೆಗಳಲ್ಲಿ ತಪ್ಪಾಗುವುದು ಸಹಜ. ಎಲ್ಲಾ ಸುದ್ದಿಗಳ ಸತ್ಯಾಸತ್ಯತೆಗಳನ್ನು ಪರಿಶೀಲಿಸಲು ಸಾಧ್ಯವಿಲ್ಲ. ಆದರೆ ಇಂತ ಸುದ್ದಿಗಳನ್ನು ಪ್ರಕಟಿಸುವ ಮುಂಚೆ ವಿಕದವರು ಫ಼ೇಸ್ ಬುಕ್ ತೆರೆದು ಪರಿಶೀಲಿಸಬಹುದಲ್ಲವೇ? ನರೇಂದ್ರ ಮೋದಿಗೆ 5900 ರಷ್ಟು ಹಿಂಬಾಲಕರು ಇದ್ದಾರೆ.