ಸವೆದ ದಾರಿಯ ನೆನಪಿನಲ್ಲಿ

ಕಾಲಂ9ಗೆ 1 ವರ್ಷ!

ಅವತ್ತು ಗೆಳೆಯರೊಂದಿಗೆ ಹೀಗೊಂದು ವಿಚಾರ ಹರಡಿಕೊಂಡು ಕುಂತಾಗ ಈ ಯಾತ್ರೆ ಒಂದು ವರ್ಷ ಸಾಗಬಹುದೆಂಬ ವಶ್ವಾಸ ಯಾರಿಗೂ ಇರಲಿಲ್ಲ. ದಿನ ಸರಿದರೆ ವರ್ಷವಾಗುತ್ತದೆ ನಿಜ!

ಮಧ್ಯಮ ಮಂದಿಯ ಒಳನಿಟ್ಟುಸಿರುಗಳನ್ನು ಹಂಚಿಕೊಳ್ಳಲೆಂದು ಹುಟ್ಟಿದ ಬ್ಲಾಗಿದು. ಆಗಲೇ ‘ವಿಮರ್ಷಕಿ’ ಬಂದು ಹೋಗಿದ್ದಳು. ‘ಸಂಪಾದಕೀಯ’ ಓಡುತ್ತಿತ್ತು. ವಿಜಯ ಕರ್ನಾಟಕ, ಕನ್ನಡಪ್ರಭ, ಉದಯವಾಣಿಗಳಲ್ಲಿ ದೊಡ್ಡ ಸ್ಥಿತ್ಯಂತರಗಳು ಕಂಡ ದಿನಗಳು. ಆ ಗಾಳಿ ಉಳಿದ ಪತ್ರಿಕೆ – ಮಾಧ್ಯಮಗಳತ್ತಲೂ ಬೀಸುತ್ತಿತ್ತು. ಹೆಚ್. ಆರ್. ರಂಗನಾಥ್ ಏನ್ಮಾಡ್ತಾರೆ? ಸಂಕೇಶ್ವರ ಮತ್ತೇನ್ಮಾಡ್ತಾರೆ.. ಎಗ್ಗಿಲ್ಲಷ್ಟು ಊಹಾಪೋಹಗಳು.

ಈಗ ವರ್ಷದ ನಂತರ ಹಿಂದೆ ತಿರುಗಿ ನೋಡಿದರೆ 160ಕ್ಕೂ ಮಿಕ್ಕ ಪೋಸ್ಟ್ ಗಳು ಸಾಗಿದ ದಾರಿಯ ಹೆಜ್ಜೆ ಗುರುತುಗಳಾಗಿ ಕಾಣಿಸುತ್ತದೆ.

ಆರ್ ಟಿ ಐ ‘ಹಿಂದೆ ಬಿದ್ದ’ ಪತ್ರಕರ್ತರು, ಸಮಯ ಪಾಲಕನ ಕಂಗಾಲು ಪ್ರಸಂಗ, ಎತ್ತಿಗೆ ಜ್ವರ – ಎಮ್ಮೆಗೆ ಬರೆ… ಇತ್ಯಾದಿ ಸುದ್ದಿಮನೆ ಕಥೆಗಳು ಕಾಲಂ9ಗೊಂದು ಸ್ಥಾನ ಕಲ್ಪಿಸಿಕೊಟ್ಟಿತು.

ಚಿತ್ರನಟ ದರ್ಶನ್ ಹೆಂಡತಿಗೆ ಹೊಡೆದು ಜೈಲು ಸೇರಿದ ಸನ್ನಿವೇಶದಲ್ಲೇ, ಉದಯವಾಣಿಯಲ್ಲಿ ಬಂದ ಲೇಖನಕ್ಕೆ ಸಮಯ ಸುದ್ದಿ ವಾಹಿನಿಯ ಪತ್ರಕರ್ತೆ ಕೆಲಸ ಕಳೆದುಕೊಂಡ ಪ್ರಸಂಗವನ್ನು ಕಾಲಂ9 ಹೊರಹಾಕಿತು. ಮಾಧ್ಯಮ ವಿಶ್ಲೇಷಣೆಗೆಂದೇ ಮೀಸಲಾದ ಬ್ಲಾಗ್ ‘ಸಂಪಾದಕೀಯ’ದಲ್ಲೂ ಕಾಲಂ9 ಉಲ್ಲೇಖವಾಯಿತು.

ಹೀಗೆ ನಿಧಾನವಾಗಿ ಹೆಜ್ಜೆಯೂರಿದ ಕಾಲಂ9 ಪ್ರಕಟಿಸಿದ ಗೋಪಾಲ ಗೌಡರ ಕೊನೆಯ ಪುಟ, ಅವತ್ತು ಎದೆನೋವು ಬಂದಿರಲಿಲ್ಲ – ಶರಣರೂ ಬಂದಿರಲಿಲ್ಲ, ಸಂಕೇಶ್ವರ ಮನೆಯಿಂದ ಕುರ್ಚಿ ಹೋದದ್ದೆಲ್ಲಿಗೆ? ನಾಗೇಶ್ ಹೆಗ್ಡೆಗೆ 13 ದಿನ ಜೈಲು!, IRS ಜಾಡಿನ ಹಾಡಿ ಪಾಡು, ರಾಘವನ್ ನೆನಪಿನ ಬಂಡಿ, ವಿಜಯವಾಣಿ ಕ್ಷಣಗಣನೆ ಇತ್ಯಾದಿ ಲೇಖನಗಳು ಒಳ್ಳೆಯ ಇಂಪಾಕ್ಟ್ ಮಾಡಿದ್ದವು.

ದಿನೇಶ್ ಅಮಿನಮಟ್ಟು ಪ್ರಜಾವಾಣಿಯಲ್ಲಿ ಬರೆದ ವಿವೇಕಾನಂದರ ಕುರಿತ ಲೇಖನ ಹಾಗೂ ಪತ್ರಕರ್ತರು ವಕೀಲರ ನಡುವೆಯ ಜಟಾಪಟಿಯ ವಿಸ್ಟ್ರುತ ಚರ್ಚೆಗೆ ಕಾಲಂ9 ವೇದಿಕೆಯಾಯಿತು.

ಕಾಲಂ9 ಮಾಧ್ಯಮ ಲೋಕದ ಆಗು ಹೋಗುಗಳನ್ನುಹಿಡಿದುಕೊಲು ಪ್ರಯತ್ನಿಸುತ್ತದೆ. ಸಿನಿಗಂಧದ ಪ್ರವೇಶ, ದೇಶ ಕಾಲ ನಿಂತದ್ದು, ಸಂಚಯ 25 ವರ್ಷ ಪೂರೈಸಿದ್ದು ‘ಸಂವಾದ’ದ 10ನೇ ವರ್ಷದ ವಿಶೇಷಾಂಕಗಳ ಬಗ್ಗೆಯೂ ಬರೆದು ಚರ್ಚೆಗೆ ವೇದಿಕೆ ಒದಗಿಸಿತು.
ಅತ್ರಿ ಬುಕ್ ಸೆಂಟರ್ ನಿರ್ಗಮನದಂತಹ ಸೂಕ್ಷ್ಮ ಸಂಗತಿಗಳನ್ನೂ ದಾಖಲಿಸಿದ ವಿಜಯ next ನಿಲ್ಲುತ್ತದೆ. ಉಮಾಪತಿ ಬೆಂಗಳೂರು vkಗೆ ಬರ್ತಾರೆ ಎಂಬಂತಹ ಅನಪೇಕ್ಷಿತ ಸುದ್ದಿ ದಾಖಲಿಸಿ ಪಶ್ಚಾತ್ತಾಪ ಪಟ್ಟದ್ದೂ ಇದೆ.

ಸುಘೋಷ್ ನಿಗಳೆಯವರ ನ್ಯೂಸ್ ಪಿಂಟ್, ರವೀಂದ್ರ ಭಟ್ಟರ ಮೂರನೇ ಕಿವಿ, ಡಿಬಿ ಚಂದ್ರೇಗೌಡರ ಆತ್ಮಕಥೆ ಪೂರ್ಣಚಂದ್ರ, ಹಿಜಡಾ ಒಬ್ಬಳ ಆತ್ಮ ಕಥೆ ಬದುಕು ಬಯಲು, ಅರವಿಂದ ಮಾಲಗತ್ತಿರವರ ಸಿನಿಮಾ ಆಗುತ್ತಿರುವ ಆತ್ಮಕಥೆ ಗೌರ್ಮೆಂಟ್ ಬ್ರಾಹ್ಮಣ, ಆರ್ ಪಿ ಜಗದೀಶರ ‘ಆ 20 ತಿಂಗಳು…’ ಇದೀಗ ಪ್ರತಿಭಾ ನಂದಕುಮಾರ್ ಅವರ ‘ಅನುದಿನದ ಅಂತರಗಂಗೆ’ ಕಾಲಂ9ರಲ್ಲಿ ಚರ್ಚೆಗೆ ಬಂದಿವೆ.

ಕನ್ನಡ ಪ್ರಭ, ಟಿವಿ9 ಚರ್ಚೆಗಳಲ್ಲಿ ‘ಟಾರ್ಗೆಟ್’ ಆಗುತ್ತಿದೆ ಎಂದು ದೂರಿದವರೂ ಇದ್ದಾರೆ, ನೀವು ಪ್ರಜಾವಾಣಿಯ ಪರ ಅಂತ ತೀರ್ಪು ಕೊಟ್ಟವರೂ ಇದ್ದಾರೆ. ಹಾಗೇನೇ ಖಾಲಿ ಇದಾರೆ, 3 ತಿಂಗಳು ನಡೆಸ್ತಾರೆ, ಆಮೇಲೆ ನಾಪತ್ತೆಯಾಗ್ತಾರೆ ಅಂತ ಗೊಣಗಿದವರೂ ಇದ್ದಾರೆ. ಯಾರ್ರೀ ಇವ್ರೂ ರೈಟಾ? ಲೆಫ಼್ಟಾ? ಅಂತ ದೇಶಕಾಲ-ಸಂವಾದವನ್ನೂ ಒಟ್ಟಿಗೆ ನೋಡಿ ಗಾಬರಿಯಾದವರೂ ಇದ್ದಾರೆ.
ಬೆರಳೆಣಿಕೆ ಮಂದಿಯಿಂದ ಆರಂಭವಾದ ಬ್ಲಾಗಿಗೆ ಇವತ್ತು 30ಕ್ಕೂ ಹೆಚ್ಚು ಮಂದಿ ಬರೀತಿದಾರೆ. ಅವರೆಲ್ಲರ ನಿಟ್ಟುಸಿರುಗಳೇ ಅಕ್ಷರಗಳಾಗಿವೆ. ಮತ್ತೇನು ಬೇಕು?
ನೀವೂ ಬರೀರಿ… ಜಾಗ ಖಾಲಿ ಇದೆ!

– ಕಾಲಂ9 ಬಳಗ

Posted on May 8, 2012, in Uncategorized. Bookmark the permalink. 3 Comments.

  1. ಅಭಿನಂದನೆಗಳು. ಅಂದ ಹಾಗೆ ‘ಸಂಪಾದಕೀಯ’ ಬ್ಲಾಗ್ ಮುಚ್ಚಿ ಹೋಯಿತೇ? ಯಾವ ಲೇಖನಗಳೂ ಬರದೇ ತಿಂಗಳ ಮೇಲಾಯಿತು.

  2. Sampadakeeya waiting something big to happen against minorities, against popular belief of society. Then it will suddenly prop up with its “Aagra Sampadakeeya”.

  3. Honest Journalist

    modalanedaagi Abhinandanegalu. Neevu maadhyamada mandi bagge bareyuvaaga kannige kaanade kelasa (baket) maaduvavara baggeyoo bareyiri.

Leave a comment